ಮೈಕ್ರೊಸ್ಕೋಪಿಯಮ್  -
ದಕ್ಷಿಣ ಆಕಾಶದ ನಕ್ಷತ್ರಪುಂಜಗಳ ಪೈಕಿ ಒಂದು. ಹ್ರಸ್ವಪ್ರತೀಕ ಒiಛಿ. ಸೂಕ್ಷ್ಮದರ್ಶಿನಿ ಪರ್ಯಾಯನಾಮ. ಬಕ (ಗ್ರಸ್), ಸಿಂಧೂ (ಇಂಡಸ್), ಶಿಲ್ಪ (ಸ್ಕಲ್‍ಪ್ಟರ್), ಫೀನಿಕ್ಸ್ ಆಸುಪಾಸಿನ ನಕ್ಷತ್ರಪುಂಜಗಳು. ಈ ಪುಂಜದ ( ತಾರೆ ಅತ್ಯಂತ ಉಜ್ವಲವಾದ್ದು. ಈ ನಕ್ಷತ್ರದ ಕಾಂತಿಮಾನ 4.71; ವಿಷುವದಂಶ 20 ಗಂ. 59 ಮಿ. 57 ಸೆ.; ಘಂಟಾವೃತ್ತಾಂಶ 320 20' 41" ದಕ್ಷಿಣ ನಿರಪೇಕ್ಷ ಕಾಂತಿಮಾನ + 0.4; ನಕ್ಷತ್ರಪ್ರರೂಪ ಉ5 ; ಸೂರ್ಯನಿಂದ 230 ಬೆಳಕು ವರ್ಷಗಳ ದೂರದಲ್ಲಿದೆ. ಐದನೆಯ ಕಾಂತಿಮಾನದವರೆಗಿನ ಮೂರು ನಕ್ಷತ್ರಗಳು ((,(,(1) ಈ ಪುಂಜದಲ್ಲಿವೆ. ನಕ್ಷತ್ರ ಖಿ ಎಂಬುದು  ಒ ನಕ್ಷತ್ರ ಪ್ರರೂಪಕ್ಕೆ ಸೇರಿದ ಚರಕಾಂತೀಯ ತಾರೆ (ವಿಷುವದಂಶ 20 ಗಂ. 24.9 ಮಿ; ಘಂಟಾವೃತ್ತಾಂತ 280 26' ದಕ್ಷಿಣ).			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ